Facilities for Activities

ಕ್ರೀಡಾಂಗಣ / Play Ground 
ಆಟಗಳು ಮತ್ತು ಕ್ರೀಡೆಗಳಿಗೆ ಪ್ರತ್ಯೇಕವಾದ ವಿಶಾಲ ಕ್ರೀಡಾಂಗಣವಿದೆ.

ಶಾಲೆಯ ಅಸೆಂಬ್ಲಿ / School Assembly
ಸಾಮೂಹಿಕ ಸಭೆಗಳು, ಸಾಮೂಹಿಕ ಕವಾಯತುಗಳನ್ನು ನಡೆಸಲು ಶಾಲೆಗೆ ಹೊಂದಿಕೊಂಡೇ ಚೊಕ್ಕವಾದ ಅಂಗಳವಿದೆ.

ಕ್ರೀಡಾ ಕೊಠಡಿ / Sports Room
ಕ್ರಿಕೆಟ್, ವಾಲಿ­ಬಾಲ್­ಗಳಂತಹ ಆಟಗಳಿಗೆ ಹಾಗೂ ಜ್ಯಾವೆಲಿನ್, ಡಿಸ್ಕ್ ಎಸೆತಗಳಂತಹ ಎಲ್ಲಾ ತರದ ಕ್ರೀಡೆಗಳಿಗೂ ತರಬೇತಿ ನೀಡಲಾಗುತ್ತದೆ. ಆಟ ಹಾಗೂ ಕ್ರೀಡಾ ಪರಿಕರಗಳ ಸಂಗ್ರಹವಿದೆ.

ಶೈಕ್ಷಣಿಕ ಪ್ರವಾಸ / Academic Tours
ಮಕ್ಕಳಲ್ಲಿ ಶಿಕ್ಷಣಕ್ಕೆ ಪೂರಕವಾಗಿ ವಾರ್ಷಿಕವಾಗಿ ಶೈಕ್ಷಣಿಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1 ರಿಂದ 2 ದಿನಗಳ ಮಟ್ಟಿನ ಪ್ರವಾಸಗಳನ್ನು ಬಹಳ ಮುತುವರ್ಜಿಯಿಂದ ನಡೆಸಲಾಗುತ್ತದೆ.

ಜ್ಞಾನಭಾರತಿ ಸಭಾಗೃಹ / Jnanabharathi Hall
ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಬೌದ್ಧಿಕ ಚಟುವಟಿಕೆಗಳಿಗೆ ಮತ್ತು ಊಟದ ವ್ಯವಸ್ಥೆಗೆ ಸೂಕ್ತವಾದ ವಿಶಾಲವಾದ ’ಜ್ಞಾನಭಾರತಿ’ ಸಭಾಗೃಹವಿದೆ.

ಗರಡಿ ಮನೆ / Gym
ಶರೀರಮಾದ್ಯಂ ಖಲುಧರ್ಮ ಸಾಧನಂ ಅನ್ನುವಂತೆ ಶಾರೀರಿಕ ದೃಢತೆಗಾಗಿ ಗರಡಿ ಮನೆ ಇದೆ. ಶ್ರೀದೇವೀ ಯುವ ವೃಂದದವರು ಹೆಚ್ಚಾಗಿ ಬಳಕೆ ಮಾಡುತ್ತಾರೆ.