Daily Activities

ಸರಸ್ವತಿ ವಂದನೆ:
ಶಾಲಾರಂಭ ಸರಸ್ವತಿ ವಂದನೆ, ಧ್ಯಾನ, ಶ್ಲೋಕ ಪಠನಗಳೊಂದಿಗೆ ನಡೆಯುವುದು. ಎಲ್ಲರೂ ಸುಖಾಸನದಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ನಡೆಯುವುದರಿಂದ ಮಾನಸಿಕ ದೃಢತೆ, ಸಹನೆ, ಏಕಾಗ್ರತೆ ಬರಲು ಸಹಕಾರಿ ಆಗುವುದು.

ನಿತ್ಯ ಪಂಚಾಂಗ ಶ್ರವಣ, ದೈನಂದಿನ ವಾರ್ತಾವಾಚನ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವುದು.

ಯೋಗ:
“ಶರೀರಮಾದ್ಯಂಖಲುಧರ್ಮಸಾಧನಂ” ಕಾಯಾ ವಾಚಾ ಮನಸಾ ಪರಿಶುದ್ಧನಾಗಿ ಕಾರ್ಯಸಾಧನೆ ಮಾಡಲು ಯೋಗಾಭ್ಯಾಸದ ದಾರಿಯೇ ಸೂಕ್ತ. ಪರಿಣತರಿಂದ ಯೋಗ ತರಬೇತಿ ನೀಡಲಾಗುವುದು.

ಕರಾಟೆ:
“ನಿಯುದ್ಧ” ಎಂದು ಕರೆಯಲ್ಪಡುವ ಬಲಗೈ ಹೊಡೆತವೇ ಕರಾಟೆ. ಕರಾಟೆ ತರಬೇತಿ ಮಕ್ಕಳಲ್ಲಿ ಮುನ್ನುಗ್ಗುವ ಛಲವನ್ನು ಬೆಳೆಸಲು ಸಹಕಾರಿ. ಉತ್ತಮ ಕರಾಟೆ ಪಟುಗಳನ್ನು ಸಿದ್ದಗೊಳಿಸುವ ತರಬೇತಿ ಇಲ್ಲಿದೆ. ಶ್ರೀಲಂಕಾದಲ್ಲಿ ಸ್ಪರ್ಧಿಸಿ 2 ಚಿನ್ನದ ಪದಕ ಕು.ಕಾವ್ಯ, ವಿದ್ಯಾಭಾರತಿ ರಾಷ್ಟ್ರಮಟ್ಟದಲ್ಲಿ ಕರಾಟೆಯಲ್ಲಿ ಬಹುಮಾನ ಬಂದಿದೆ.

ಪ್ರತಿಭಾ ಕಾರಂಜಿ:
ಪ್ರತಿಭಾ ಕಾರಂಜಿಯಂತಹ ಪ್ರತಿಭೆಗಳ ಬೆಳವಣಿಗೆಗಳಿಗೆ ಪೂರಕವಾದ ವೇದಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ.

ಇದಲ್ಲದೆ ಸಾಮೂಹಿಕ ಕವಾಯತು, ಸಾಮೂಹಿಕ ಸಭೆಗಳಂತಹ ಅವಧಿಗಳ ಮೂಲಕ ಮಕ್ಕಳಲ್ಲಿ ಶಿಸ್ತು ಮೂಡಿಸುವ ಚಟುವಟಿಕೆಗಳೂ ನಿಯಮಿತವಾಗಿ ನಡೆಯುತ್ತವೆ.