Rules and Regulations

⭕ 1 ನೇ ತರಗತಿಗೆ ದಾಖಲಾತಿ ಬಯಸುವವರ ಹೆತ್ತವರು, ತಮ್ಮ ಮಕ್ಕಳ ಜನನ ಪ್ರಮಾಣ ಪತ್ರ (ಸೂಕ್ತ ಪ್ರಾಧಿಕಾರದಿಂದ ಪ್ರಮಾಣಿತ), 2 ಭಾವಚಿತ್ರ, ಆಧಾರ್ ಚೀಟಿ ಪ್ರತಿ, ಪಡಿತರಚೀಟಿ ಪ್ರತಿ, ಅಗತ್ಯಕ್ಕನುಸಾರವಾಗಿ ಜಾತಿ-ಆದಾಯದ ಪ್ರಮಾಣಪತ್ರಗಳನ್ನು ತರಬೇಕು.

⭕ 8ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಬಂದು 2 ಭಾವಚಿತ್ರ, ಆಧಾರ್ ಚೀಟಿ ಪ್ರತಿ, ಪಡಿತರ ಚೀಟಿ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಮತ್ತು ವರ್ಗಾವಣೆ ಪತ್ರದೊಂದಿಗೆ ಪೂರ್ಣ ಶುಲ್ಕ ಪಾವತಿಸಿ, ದಾಖಲಾತಿ ಮಾಡಿಸಿಕೊಳ್ಳುವುದು. ಅಗತ್ಯಕ್ಕನುಸಾರವಾಗಿ ಜಾತಿ-ಆದಾಯದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

⭕ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾದ 2 ವಾರಗಳೊಳಗೆ ಪುನರಾವರ್ತನಾ ಪರೀಕ್ಷೆಯಿರುತ್ತದೆ.

⭕ ವಿದ್ಯಾರ್ಥಿವೇತನ ಪಡೆಯ ಬಯಸಲಿಚ್ಛಿಸುವವರು ಕಛೇರಿಯಲ್ಲಿ ವಿಚಾರಿಸಿ ಅಗತ್ಯ ಪ್ರಮಾಣಪತ್ರವನ್ನು ಒಪ್ಪಿಸುವುದು.

⭕ ಶಾಲಾ ಸಮಯದಲ್ಲಿ ಅನುಮತಿಯಿಲ್ಲದೆ ಶಾಲಾ ಆವರಣದಿಂದ ಹೊರಗೆ ಹೋಗಬಾರದು.

⭕ ವಿದ್ಯಾರ್ಥಿಗಳು ಮಧ್ಯಾಹ್ನದೂಟವನ್ನು ತಪ್ಪಿಸಬಾರದು.

⭕ ಮದ್ಯ, ಜರ್ದಾ, ಮಧು, ಪಾನ್ ಪರಾಗ್­ಗಳಂತಹ ಅಮಲು ಪದಾರ್ಥಗಳ ಸೇವನೆ ನಿಷಿದ್ಧ.

⭕ ವಿದ್ಯಾರ್ಥಿಗಳು ಶಾಲೆಯ ಅಧ್ಯಾಪಕರು ಮತ್ತು ಇತರ ಸಿಬ್ಬಂದಿಯವರಲ್ಲಿ ಉತ್ತಮ ಸಂಬಂಧಹೊಂದಿದ್ದು ವಿಧೇಯರಾಗಿರಬೇಕು. ಪಾಠ ಅಥವಾ ಇನ್ನಿತರ ವಿಷಯಗಳಲ್ಲಿ ಸಮಸ್ಯೆ ಅಥವಾ ಸಂಶಯ ಬಂದರೆ ಸಂಬಂಧಪಟ್ಟ ಅಧ್ಯಾಪಕರು ಅಥವಾ ಸಿಬ್ಬಂದಿಯವರಲ್ಲಿ ಕೇಳಿ ಪರಿಹರಿಸಬೇಕು.

⭕ ಕೆಲವೊಮ್ಮೆ ಹೆಚ್ಚಿನ ಅಭ್ಯಾಸಕ್ಕೋಸ್ಕರ ಶಾಲಾರಂಭಕ್ಕೆ ಮುನ್ನ ಅಥವಾ ಶಾಲೆ ಬಿಟ್ಟ ನಂತರ ಹೆಚ್ಚುವರಿ ತರಗತಿ ನಡೆಸಬೇಕಾಗಿ ಬಂದರೆ ಅದಕ್ಕೆ ವಿದ್ಯಾರ್ಥಿಗಳು ತಪ್ಪದೆ ಹಾಜರಾಗಬೇಕು.

⭕ ಶಾಲಾ ಚುಟುವಟಿಕೆಗಳಲ್ಲಿ, ಸಮಾರಂಭಗಳಲ್ಲಿ ಪಠ್ಯೇತರ ವಿಷಯಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಬೇಕು.

⭕ ಶಾಲಾ ವಾಚನಾಲಯದಲ್ಲಿರುವ ಪುಸ್ತಕಗಳನ್ನು ವಾರದಲ್ಲಿ ನಿಗದಿಪಡಿಸಿದ ದಿನಗಳಂದು ಪಡೆದು ಸರಿಯಾಗಿ ಹಿಂತಿರುಗಿಸುವುದರೊಂದಿಗೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು.

⭕ ಶಾಲಾ ಶಿಸ್ತಿನ ಮೂಲವಾಗಿರುವ ಶಾಲಾ ಮಂತ್ರಿಮಂಡಲದಲ್ಲಿ ಉತ್ಸಾಹದಿಂದ ಭಾಗವಹಿಸುವುದು.

⭕ ವಿದ್ಯಾರ್ಥಿಗಳು ಅನಗತ್ಯ ರಜೆ ಮಾಡಬಾರದು. ಅಗತ್ಯ ರಜೆ ಮಾಡಬೇಕಾಗಿ ಬಂದರೆ ಹೆತ್ತವರು ಸಹಿ ಮಾಡಿದ ರಜಾ ಅರ್ಜಿಯನ್ನು ಒಪ್ಪಿಸಬೇಕು. ಅನಾರೋಗ್ಯದಿಂದ ದೀರ್ಘ ರಜೆಯಾದರೆ ವೈದ್ಯಕೀಯ ಪ್ರಮಾಣ ಪತ್ರವನ್ನು ಒಪ್ಪಿಸುವುದು.

⭕ ಪ್ರತಿ ಪರೀಕ್ಷೆಯ ನಂತರ ಅಭಿವೃದ್ಧಿ ವೃದ್ಧಿ ವರದಿಯನ್ನು ಹೆತ್ತವರಿಗೆ ಕಳಿಸಲಾಗುವುದು. ಪ್ರಗತಿ ಕುಂಠಿತವಾಗಿದ್ದರೆ ಹೆತ್ತವರು ಆಗಾಗ್ಗೆ ಬಂದು ಸಂಬಂಧಪಟ್ಟವರಲ್ಲಿ ತಿಳಿದು ಸೂಕ್ತ ಸಲಹೆ, ಮಾರ್ಗದರ್ಶನವನ್ನು ಪಡೆಯಬೇಕು.

⭕ ಮನೆಗೆಲಸವನ್ನು ಕ್ಲಪ್ತ ಸಮಯದಲ್ಲಿ ಪೂರೈಸಿ ಉಪಾಧ್ಯಾಯರಿಗೆ ಒಪ್ಪಿಸಬೇಕು.

⭕ ಹೊಲಸು ಮಾತುಗಳಾಡುವುದು, ಪರಸ್ಪರ ಜಗಳವಾಡುವುದು ಕೂಡದು. ಇತರರೊಂದಿಗೆ ಗೆಳೆತನದಿಂದಿರಬೇಕು.

⭕ ತರಗತಿ ನಡೆಯುತ್ತಿರುವಾಗ ಇತರರೊಡನೆ ಯಾವುದೇ ಸಂಪರ್ಕ ಅಥವಾ ವ್ಯವಹಾರ ಇಟ್ಟುಕೊಳ್ಳಬಾರದು.

⭕ ವಿದ್ಯಾರ್ಥಿಗಳಿಗೆ ಬರುವ ಪತ್ರಗಳು, ದೂರವಾಣಿಕರೆಗಳು ಮುಖ್ಯೋಪಧ್ಯಾಯರ ಪರಿಶೀಲನೆಗೆ ಒಳಪಡುತ್ತದೆ.

⭕ ಶಾಲೆಗೆ ಮೊಬೈಲ್ ದೂರವಾಣಿ ತರಬಾರದು.

⭕ ಯಾವುದೇ ಕಾರಣಕ್ಕೂ ಶಾಲಾ ಅವಧಿ ಮಧ್ಯದಲ್ಲಿ ವಿದ್ಯಾರ್ಥಿಗಳನ್ನು ಹೊರಗೆ ಅಥವಾ ಮನೆಗೆ ಕಳಿಸಲಾಗುವುದಿಲ್ಲ. ಅನಿವಾರ್ಯವಾಗಿ ಕಳಿಸಬೇಕಾಗಿ ಬಂದರೆ ಸಂಬಂಧಪಟ್ಟ ದಾಖಲೆಗಳನ್ನು ಒಪ್ಪಿಸಿ ಹೆತ್ತವರೇ ಬಂದು ಕರೆದೊಯ್ಯುವುದು.

⭕ ಶಾಲಾ ಸೊತ್ತುಗಳನ್ನು  ಒಳ್ಳೆಯ ರೀತಿಯಲ್ಲಿ ಉಪಯೋಗಿಸಬೇಕು. ಉದ್ದೇಶಪೂರ್ವಕವಾಗಿ ಹಾನಿಮಾಡುವವರು ದಂಡನೆಗೆ ಅಥವಾ ಜುಲ್ಮಾನೆಗೆ ಅರ್ಹರು.

⭕ ಶಾಲಾ ಸಮವಸ್ತ್ರವನ್ನು ವಾರಪೂರ್ತಿ ಧರಿಸುವುದು.

⭕ ಶಾಲೆಗೆ ಬಂದು ಹೋಗಲು ಶಾಲಾ ಬಸ್ಸಿನ ವ್ಯವಸ್ಥೆ ಇರುತ್ತದೆ. ಬೇಕಾದವರು ಉಪಯೋಗಿಸಿಕೊಳ್ಳಬಹುದು.

ಶಾಲಾಭ್ಯಾಸದ ವೇಳೆಯ ವಿವರ

ಸೋಮವಾರದಿಂದ – ಶುಕ್ರವಾರದವರೆಗೆ

ಪೂರ್ವಾಹ್ನ 9:15 ರಿಂದ : ಪ್ರಾರ್ಥನೆ, ಧ್ಯಾನ (ಎಲ್ಲಾ ವಿದ್ಯಾರ್ಥಿಗಳೂ ಹಾಜರಿರಬೇಕು)
ಪೂರ್ವಾಹ್ನ 9:45 ರಿಂದ ಮಧ್ಯಾಹ್ನ 12:40 ರ ತನಕ : ಪಾಠದ ಅವಧಿಗಳು

ಅಪರಾಹ್ನ 1:20 ರಿಂದ 1:30 ರ ತನಕ : ದೇಶಭಕ್ತಿಗೀತೆಯ ಅಭ್ಯಾಸ
ಅಪರಾಹ್ನ 1:30 ರಿಂದ ಅಪರಾಹ್ನ 4:20 ರಿಂದ : ಪಾಠದ ಅವಧಿಗಳು

ಶನಿವಾರ
ಪೂರ್ವಾಹ್ನ 9:30 ರಿಂದ ಮಧ್ಯಾಹ್ನ 12:45 ರ ತನಕ : ಪಾಠದ ಅವಧಿಗಳು