History

ಇತಿಹಾಸ

ದ. ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚಾ ಗ್ರಾಮದಲ್ಲಿ ಪ್ರೌಢಶಿಕ್ಷಣದ ಸೌಲಭ್ಯವೇ ಇಲ್ಲದ ಆ ಕಾಲದಲ್ಲಿ ಊರಹಿರಿಯರು ಹೈಸ್ಕೂಲ್ ಆಗಬೇಕೆಂದು ಹಠಕ್ಕೆ ಬಿದ್ದುದರ ಫಲ ಈ ಸಂಸ್ಥೆ.

ಉರಿಮಜಲು ರಾಮಭಟ್, ಶ್ರೀರಮೇಶ್ಚಂದ್ರ ನಾಯಕ್, ಮಣಿಲ ಈಶ್ವರಶಾಸ್ತ್ರಿ, ನಡುಸಾರ್ ನಾರಾಯಣ ಭಟ್ಟ ಮೊದಲಾದವರ ಉತ್ಕಟ ಆಕಾಂಕ್ಷೆಯ ಪ್ರಯತ್ನದ ಮೂರ್ತರೂಪವಾಗಿ 1981 ರಲ್ಲಿ ಪುಣಚ ಪರಿಯಾಲ್ತಡ್ಕ ಪಂಚಾಯತ್ ಕಟ್ಟಡದಲ್ಲಿ ಶಾಲೆ ಆರಂಭ.

ತದನಂತರ 1983 ರಲ್ಲಿ 2 ಕಿಮೀ ದೂರದ ಕಲ್ಪಣೆ ಎಂಬ ಗುಡ್ಡಕ್ಕೆ ಇದು ಸ್ಥಳಾಂತರವಾಯಿತು.

ಕೆಂಪುಕಲ್ಲಿನ ಪಣೆಯ ಪ್ರದೇಶವೇ ಕಲ್ಪಣೆ. ಬರೀ ಗುಂಡಿಗಳು, ಕಲ್ಲುಗುಡ್ಡಗಳಿಂದ ಕೂಡಿದ್ದ ಈ ಸ್ಥಳ ವಿದ್ಯಾದೇಗುಲ ತಲೆಯೆತ್ತಲು ಅನುಕೂಲಕರವಾಗಿ ಏನೂ ಇರಲಿಲ್ಲ. ಆದರೆ ಊರವರೆಲ್ಲರ ಶ್ರಮದಾನ, ಕಲ್ಲುಮರಗಳ ಕೊಡುಗೆ ನಿರಂತರವಾಗಿ ಅಸಾಧ್ಯವೂ ಸಾಧ್ಯವಾಗಿ ಈ ಜ್ಞಾನದೇಗುಲ ತಲೆ ಎತ್ತಿತು. ಅಂದು ಬೋಳಾಗಿದ್ದ ಗುಡ್ಡ ಇಂದು ಹಚ್ಚಹಸಿರಾಗಿ “ಗುರುಕುಲ” ದ ಪ್ರಶಾಂತತೆ ಇಲ್ಲಿ ನೆಲೆಸಿದೆ.

ಶ್ರೀದೇವಿಯ ಹೆಸರು ಹೊತ್ತ ಶಾಲೆ, ಗ್ರಾಮದೇವತೆಯ ಕೃಪಾಕಟಾಕ್ಷದ ಫಲವಾಗಿ ಇಂದು “ದೇವಿನಗರ” ಎಂಬ ಹೆಸರು ಬಂತು.

ಮಾನನೀಯ ಸರಸಂಘಚಾಲಕರಾದ (ರಜ್ಜೂಭೈಯ್ಯಾ ) ರಾಜೇಂದ್ರ ಸಿಂಹಜೀ, ಚಾರುಕೀರ್ತಿ ಭಟ್ಟಾರಕರ ದಿವ್ಯಹಸ್ತದಿಂದ ಇದು ಉದ್ಘಾಟನೆಗೊಂಡಿತು.

1981 ರಲ್ಲಿ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಹಾಗೂ ಅದರ ಆಸುಪಾಸಿನ ಗ್ರಾಮಗಳ ವಿದ್ಯಾರ್ಥಿಗಳು ದೂರದ ಪುತ್ತೂರು ಯಾ ವಿಟ್ಲಕ್ಕೆ ಪ್ರಾಥಮಿಕ ಶಿಕ್ಷಣಕ್ಕೆ ಹೋಗಬೇಕಾಗಿತ್ತು. ಎಷ್ಟೋ ಜನರು ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ಪರಿಸ್ಥಿತಿ. ಇಂಥ ಸಂದರ್ಭದಲ್ಲಿ ಊರವರ ವಿದ್ಯಾರ್ಜನೆಯ ಅಗತ್ಯತೆಗಳನ್ನು ಪೂರೈಸಲು ಸಂಸ್ಕಾರಯುತ ಶಿಕ್ಷಣ “ಪೂರ್ವ ಗುರುಕುಲ ಪದ್ಧತಿ” ಬಂದರೆ ಭದ್ರವಾಗುವುದು ಎಂಬ ಆಶೋತ್ತರಗಳನ್ನು ಹೊತ್ತು ಗುರುಕುಲವನ್ನು ನೆನಪಿಸುವ ಪುಣಚ ಗ್ರಾಮದ ದೇವಿನಗರದ ನಿಸರ್ಗ ಸುಂದರ ಪ್ರಶಾಂತ ಪರಿಸರದಲ್ಲಿ 1981 ರಲ್ಲಿ ಶ್ರೀದೇವೀ ವಿದ್ಯಾಕೇಂದ್ರ (ಶ್ರೀದೇವೀ ಪ್ರೌಢಶಾಲೆ) ತಲೆ ಎತ್ತಿತು.

ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಸ್ಥಳೀಯ ಶ್ರೀದೇವೀ ವಿದ್ಯಾಕೇಂದ್ರ ಆಡಳಿತ ಸಮಿತಿಯ ಬೆಂಬಲದಿಂದ ಕ್ರಮವಾಗಿ ರೂಪುಗೊಂಡು ಬೆಳೆಯುತ್ತಿದೆ. ವಿದ್ಯಾಭಾರತಿಯ ಜೊತೆ ಸಂಲಗ್ನ ಮಾಡಿಕೊಂಡ ಈ ಸಂಸ್ಥೆಯಲ್ಲಿ ಯೋಗ, ಸಂಗೀತ, ಸಂಸ್ಕೃತ, ಸಂಸ್ಕಾರ ಮತ್ತು ಕ್ರೀಡೆ, ಪಂಚಮುಖಿ ಶಿಕ್ಷಣದೊಡನೆ ಅಧುನಿಕ ಶಿಕ್ಷಣ ಸಾಗಬೇಕೆಂಬ ಉದ್ದೇಶ ನಮ್ಮದು.

History

In 1981, for children from Punacha and neighboring villages it was a situation that for their primary education they were required to go far away cities like Vitla and Puttur. Due to inadequate transportation facility and poverty, most of the times people would choose terminating their education, at all. At this situation,to fulfill the basic educational needs of villagers, in the middle of beautiful nature “Shridevi high school” was established with the aspirations of cultured education. Over a period it is grown as “Shridevi Vidya Kendra”.

Under the affiliation of Vidyavardhakasangha Puttur, Shridevi Vidya Kendra is growing systematically with the consistent support of “Shridevi Vidya Kendra committee”. Associated with Vidyabhaarathi, in this institute, our motto is to have five dimensional education (viz, Yoga, music, Sanskrit, culture and sports).