ಗ್ರಂಥಾಲಯದ ಹೆಸರು ‘ಶೃದ್ಧಾ’. ಇಲ್ಲಿ ಡಾ. ಎಸ್.ಎಲ್.ಭೈರಪ್ಪ, ಆನಕೃ, ಕಾರಂತರು, ಕುವೆಂಪು ಮುಂತಾದ ಪ್ರಸಿದ್ಧ ಸಾಹಿತಿಗಳ ಕಥೆ-ಕಾದಂಬರಿಗಳನ್ನೊಳಗೊಂಡ ಸುಮಾರು 5000 ಪುಸ್ತಕಗಳಿವೆ.
ರಾಷ್ಟ್ರೋತ್ಥಾನ ಸಾಹಿತ್ಯದ ವಿಶೇಷ ಸಂಗ್ರಹವಿದೆ. ಸಾಕಷ್ಟು ಭಾರತ-ಭಾರತಿ ಪುಸ್ತಕಗಳು ಮಕ್ಕಳಿಗೆ ಲಭ್ಯ. ವಿಮರ್ಶಾ ಗ್ರಂಥಗಳು, ಮಹಾ ಪುರುಷರ ಜೀವನ ಚರಿತ್ರೆಗಳು, ನಾಟಕ, ಕವನ ಸಂಕಲನಗಳು, ಮಕ್ಕಳ ಸಣ್ಣಕಥೆಗಳು, ಪ್ರಸಾರಂಗದ ಪುಸ್ತಕಗಳು ಮತ್ತು ಆಧಾರಗ್ರಂಥಗಳೆಂಬ ವಿಭಾಗಗಳಿವೆ.
ಪುಸ್ತಕ ಸಪ್ತಾಹ ಮೂಲಕ ದಾನಿಗಳಿಂದ ಪುಸ್ತಕ ಸಂಗ್ರಹವಾಗಿದೆ. ವಿದ್ಯಾರ್ಥಿಗಳ ವಿಶೇಷ ಅನೂಕೂಲಕ್ಕಾಗಿ ‘ತರಗತಿ ಗ್ರಂಥಾಲಯ’ದ ವ್ಯವಸ್ಥೆ ಇದೆ.