ದಿನಾಂಕ 21-06-2024 ನೇ ಶುಕ್ರವಾರ ಶ್ರೀದೇವಿ ವಿದ್ಯಾಕೇಂದ್ರದ ನಮೋಭಾರತಿ ಸಭಾಂಗಣದಲ್ಲಿ “ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಸರಸ್ವತಿ ವಂದನೆ , ವಿದ್ಯಾರ್ಥಿಗಳಿಂದ ಯೋಗ ಪ್ರಾರ್ಥನೆ , ಯೋಗ ಗೀತೆ ಹಾಗೂ ಯೋಗ ನೃತ್ಯಗಳ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಗಳಾದ ಡಾ. ವಿಶ್ವೇಶ್ವರ ವಿ ಕೆ , ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಯನಡ್ಕ ಇವರು ಯೋಗ ದಿನದ ಮಹತ್ವ, ಯೋಗದಿಂದ ನಮಗಾಗುವ ಪ್ರಯೋಜನಗಳನ್ನು ಹಲವಾರು ನಿದರ್ಶನಗಳ ಮೂಲಕ ತಿಳಿಸಿ ಕೊಟ್ಟರು. ಇನ್ನೋರ್ವ ಅತಿಥಿ ಶ್ರೀ ಅರುಣ್ ಕುಮಾರ್, ನಿರ್ದೇಶಕರು ಸಮಾಜ ಸೇವಾ ಸಹಕಾರಿ ಬ್ಯಾಂಕ್ ಬಂಟ್ವಾಳ ಇವರು ನಿತ್ಯ ಯೋಗ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ತಿಳಿಸಿದರು. ನಂತರ ಎಲ್ಲರೂ ಯೋಗ ಪ್ರತಿಜ್ಞೆಯನ್ನು ಕೈಗೊಂಡರು. ವೇದಿಕೆಯಲ್ಲಿ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು . ಕ್ರೀಡಾ ಸಂಘದ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.