ಶ್ರೀ ಮಾಯಿಲಪ್ಪಣ್ಣನವರ ಬೀಳ್ಕೊಡುಗೆ ಸಮಾರಂಭ

ದಿನಾಂಕ 30.11.2020 ಸೋಮವಾರದಂದು ಶ್ರೀದೇವಿ ಪ್ರೌಢಶಾಲೆಯಲ್ಲಿ ಅಟೆಂಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಮಾಯಿಲ.ಎಚ್‌ ಇವರು ನಿವೃತ್ತರಾಗಿರುತ್ತಾರೆ.ಅವರ ಬೀಳ್ಕೊಡುಗೆ ಸಮಾರಂಭವನ್ನು ದಿನಾಂಕ 01.12.2020 ಮಂಗಳವಾರದಂದು ಪ್ರೌಢಶಾಲೆಯ ನಮೋಭಾರತಿ ಸಭಾಂಗಣದಲ್ಲಿ ನಡೆಸಲಾಯಿತು.ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಇವರು ಮುಖ್ಯ ಅತಿಥಿಗಳಾಗಿದ್ದ ವೇದಿಕೆಯಲ್ಲಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಎಸ್.‌ ಆರ್‌ ಸತೀಶ್ಚಂದ್ರ ,ಸಂಚಾಲಕರಾದ ಶ್ರೀ ಜಯಶ್ಯಾಂ ನೀರ್ಕಜೆ , ನಿವೃತ್ತ ಅಟೆಂಡರ್‌ ಶ್ರೀ ಮಾಯಿಲ ಎಚ್‌ ಹಾಗೂ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ರಜನಿ ಉಪಸ್ಥಿತರಿದ್ದರು. ದೀಪಜ್ವಲನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಬಳಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ, ಪ್ರಾಥಮಿಕ ಶಾಲೆಯ ಶಿಕ್ಷಕರು ,ಹಿರಿಯ ವಿದ್ಯಾಥಿಗಳು ಶ್ರೀ ಮಾಯಿಲ. ಎಚ್‌ ಇವರ ಜತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡರು.ನಂತರ ವೇದಿಕೆಯಲ್ಲಿದ್ದ ಅತಿಥಿಗಳೆಲ್ಲ ಸೇರಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. 92 ರ ಸಾಲಿನ 10 ನೇ ತರಗತಿಯ ವಿದ್ಯಾಥಿಗಳಿಂದ ತಂಡದವರಿಂದ,ಹಿರಿಯ ವಿದ್ಯಾಥಿಗಳ ಕಡೆಯಿಂದ ಹಾಗೂ ಶಾರದೋತ್ಸವ ಸಮಿತಿಯ ಪರವಾಗಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿದ್ದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಇವರು ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಎಂಬ ಹಾಡಿನ ಸಾಲಿನೊಂದಿಗೆ ಆರಂಭಿಸಿ ಶ್ರೀ ಮಾಯಿಲ ಎಚ್‌ ಇವರು ಕೂಡಾ ಅಂತಹ ವನಸುಮದಂತೆ ತನ್ನ ನಿತ್ಯಕಾಯಕವನ್ನು ಮಾಡುತ್ತಾ ತನ್ನ ಪರಿಸರವನ್ನು ತನಗರಿವಿರದಂತೆ ,ತನ್ನಿರವನ್ನು ನೀಡಿದ್ದಾರೆ. ಆದ್ದರಿಂದಲೇ ಇಂದು ಇಷ್ಟು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಇಲ್ಲಿ ನೆರೆದು ಅವರನ್ನು ಬೀಳ್ಕೊಡುತ್ತಿದ್ದಾರೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು. ಅಧ್ಯಕ್ಷ ಸ್ಥಾನದಲ್ಲಿದ್ದ ಸಂಸ್ಥೆಯ ಅಧ್ಯಕ್ಷರು ಶ್ರೀ.ಎಸ್‌ ಆರ್‌ ಮಾತನಾಡುತ್ತಾ ಮುಂದೆಯೂ ಇಂತಹ ವ್ಯಕ್ತಿಗಳ ಸಂಸ್ಥೆಗೆ ,ಸಮಾಜಕ್ಕೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. ಸಂಚಾಲಕರಾದ ಶ್ರೀ ಜಯಶ್ಯಾಂ ನೀಕಜೆ ಸ್ವಾಗತಿಸಿ ,ಸಹಸಂಚಾಲಕಿ ಶ್ರೀಮತಿ ಗಂಗಮ್ಮ ಪಿ ವಂದನಾರ್ಪಣೆಗೈದರು.ಪ್ರೌಢಶಾಲಾ ಸಹಶಿಕ್ಷಕಿ ಶ್ರೀಮತಿ ಸವಿತಾ ವಿ ಇವರು ಅಭಿನಂದನಾ ಪತ್ರ ವಾಚಿಸಿದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀ ಲೋಕೇಶ್‌ ಎಸ್‌ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.