ಇಂದಿನ ಆಧುನಿಕತೆಯ ನಾಗಾಲೋಟದ ವೇಗಕ್ಕೆ ಹೊಂದುವ ದಿಸೆಯಲ್ಲಿ ’ಚುರುಕು ತರಗತಿ’ಯ ಸೌಲಭ್ಯವೂ ಇದೆ. ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದ ಕ್ಲಿಷ್ಟ ವಿಚಾರಗಳನ್ನು ಸುಸಜ್ಜಿತ ಉಪಕರಣ ಹಾಗೂ ತಾಂತ್ರಿಕ ಪರದೆಯ ಮೇಲೆ ಮೂಡಿಸಿ ಮಕ್ಕಳಲ್ಲಿ ಅದರ ಸುಲಭ ಗ್ರಹಿಕೆಗೆ ಹಾಗೂ ಸ್ಪಷ್ಟತೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಹಿರಿಯ ವಿದ್ಯಾರ್ಥಿಯ ಕೊಡುಗೆಯಿಂದ ಈ ಸೌಲಭ್ಯ ಮಕ್ಕಳಿಗೆ ಒದಗಿದೆ.