ಪುಣಚ ಜೂನ್ 10 : ಶ್ರೀದೇವಿ ವಿದ್ಯಾಕೇಂದ್ರ, ದೇವಿನಗರ, ಪುಣಚದಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ’ಯಕ್ಷಗಾನ ನಾಟ್ಯ ತರಬೇತಿ’ ಆರಂಭವಾಯಿತು. ಯಕ್ಷಗಾನ ನಾಟ್ಯಗುರು ಶ್ರೀ ಸುಬ್ರಹ್ಮಣ್ಯ ಸಂಟ್ಯಾರು ದೀಪ ಬೆಳಗಿಸಿ, ಆರಂಭಿಕ ಹೆಜ್ಜೆ ಹಾಕಿಸಿ ತರಗತಿಗೆ ನಾಂದಿ ಹಾಡಿದರು. ಯಕ್ಷಗಾನ ಪಂಚ ಅಂಗಗಳನ್ನು ಒಳಗೊಂಡ ವಿಶೇಷ ಕಲೆ ಅದರಿಂದ ಮಕ್ಕಳ ಬೌದ್ಧಿಕ, ಶಾರೀರಿಕ, ವಾಚಿಕ ಶಕ್ತಿಗಳು ಹೆಚ್ಚುತ್ತವೆ ಎಂದರು.
ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಗಂಗಮ್ಮ , ಹಿಂದೆ ಯಕ್ಷಗಾನ ನೋಡಿ, ಅನುಭವದಿಂದ ಕಲಿಯುವುದೇ ಹೆಚ್ಚಾಗಿತ್ತು. ಈಗ ಅದಕ್ಕಾಗಿ ವಿಶೇಷ ತರಬೇತಿಗಳು ನಿಮಗೆ ದೊರಕಿದೆ. ನಿರಂತರ ಏಕಾಗ್ರತೆಯಿಂದ ಕಲಿತರೆ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದರು. ನಿವೃತ್ತ ಅಧ್ಯಾಪಕರಾದ ಶ್ರೀ ಹರಿಕೃಷ್ಣಶಾಸ್ತ್ರಿ, ಶ್ರೀ ಪುರುರುಷೋತ್ತಮ ಓ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕಿ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಕುಮಾರಿ ಕವಿತಾ ವಂದಿಸಿದರು. ಶ್ರೀಮತಿ ರಜನಿ ನಿರೂಪಿಸಿದರು. ಶಿಕ್ಷಕಿಯಾದ ಶ್ರೀಮತಿ ರಮ್ಯಶ್ರೀ, ಕುಮಾರಿ ಅಕ್ಷತಾ, ಶ್ರೀರಾಮ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀ ಕೊಟ್ರೇಶಪ್ಪ, ಶ್ರೀ ಸತೀಶ ಹಿತ್ತಿಲು ಸಹಕರಿಸಿದರು. ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಗೆ ತರಗತಿ ನಡೆಯುತ್ತದೆ. ಯಾವುದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಪ್ರವೇಶಕ್ಕೆ ಅವಕಾಶವಿದೆ ಎಂದು ಸಂಘಟಕರು ತಿಳಿಸಿದರು.